


ಬಂಟ್ವಾಳ: ಮಂಚಿ ಗ್ರಾಮದ ಕುಕ್ಕಾಜೆಯಲ್ಲಿ ಫ್ರೆಂಡ್ಸ್ ಕುಕ್ಕಾಜೆ ಮತ್ತು ಮಂಚಿ ಕುಕ್ಕಾಜೆ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಇದರ ಆಶ್ರಯದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಅಂಡರ್ ಆರ್ಮ್ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಕುಕ್ಕಾಜೆ ಶಾಲಾ ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಬಂಟ್ವಾಳ ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಆಲಿ ವಹಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ದಯಾನಂದ ನೂಜಿಪ್ಪಾಡಿ, ನಿವೃತ್ತ ಅಧ್ಯಾಪಕ ಪಿ.ಸುರೇಶ್ ರಾವ್, ಸಾಮಾಜಿಕ ಕಾರ್ಯಕರ್ತ ಆಶಿಕ್ ಕುಕ್ಕಾಜೆ, ಬ್ಲಡ್ ಹೆಲ್ಪ್ ಲೈನ್ ಕಾರ್ಯನಿರ್ವಾಹಕ ಫೈಝಲ್ ಮಂಚಿ ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಅಥಿತಿಗಳಾಗಿ ಮಾಜಿ ಸಚಿವ ರಮಾನಾಥ ರೈ, ಜಿಲ್ಲಾ ಪಂಚಾಯತ್ ಸದಸ್ಯ, ಎಂ.ಎಸ್.ಮಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಮಂಜುಳಾ ಮಾದವ ಮಾವೆ, ಕಾಂಗ್ರೆಸ್ ಹಿಂದುಳಿದ ವರ್ಗ ಸಮಿತಿ ಅಧ್ಯಕ್ಷ ಮಾದವ ಮಾವೆ, ಮಂಚಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರಮೀಳ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಡಿ.ಕೆ. ಹಂಝ, ಮಂಚಿ ಗ್ರಾಮ ಪಂಚಾಯತ್ ಸದಸ್ಯ ಜಿ.ಎಂ. ಇಬ್ರಾಹಿಂ, ಸಮೀವುಲ್ಲಾ, ಉದ್ಯಮಿ ರಫೀಖ್ ಕುಕ್ಕಾಜೆ, ನವಯುಗ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಹಸೈನಾರ್ ಪಿ.ಕೆ., ಮಂಚಿ ವಲಯ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ರಹಿಮಾನ್, ಇಂಟಕ್ ಉಪಾಧ್ಯಕ್ಷ ಸ್ಟೀವನ್, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಚೌಕದಪಾಲು, ಮಾಜಿ ಕಬಡ್ಡಿ ಆಟಗಾರ ಕೆ.ಬಿ.ಹಮೀದ್, ಮಾಜಿ ಎಸ್.ಡಿ.ಎಂ.ಸಿ ಅಧ್ಯಕ್ಷ ಅಬ್ದುಲ್ ಹಮೀದ್, ಸೂಪರ್ ಸ್ಟಾರ್ ಮಾಜಿ ಅಧ್ಯಕ್ಷ ಪುರಂದರ ಸಾಲಿಯಾನ್, ಕೃಷಿಕ ವಿಠಲ ಪ್ರಭು, ಪಾಟೀಲ್, ಟಿಂಬರ್ ಮರ್ಚೆಂಟ್ ಅಬ್ದುಲ್ ಲತೀಫ್, ಮಾಜಿ ಎಸ್.ಡಿ.ಎಂ.ಸಿ ಅಧ್ಯಕ್ಷ ಅನ್ಸಾರ್ ಡಿ.ಕೆ., ಮಂಚಿ ಕುಕ್ಕಾಜೆ ಎಜುಕೇಶನಲ್ ಮತ್ತು ಚಾರಿಟೇಬಲ್ ಅಧ್ಯಕ್ಷ ಲತೀಫ್ ಸಾಗರ್,, ಪದ್ಮನಾಭ ಕಂಚಿಲ, ಫ್ರೆಂಡ್ಸ್ ಕ್ರಿಕೆಟರ್ಸ್ ಅಧ್ಯಕ್ಷ ಅಬೂಬಕರ್ ಬೈಲ್ ಮತ್ತಿತರ ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು.







