Wednesday, October 18, 2023

ಮಾಣಿ : 1001 ಗಣಗಳಿಗೆ “ವನಭೊಜನ “

Must read

ಬಂಟ್ವಾಳ; ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಗ್ರಾಮ ದೈವಕ್ಕೆ ಸಂಬಂಧಪಟ್ಟಂತೆ 1001 ಗಣಗಳಿಗೆ “ವನಭೊಜನ ” ಕಾರ್ಯಕ್ರಮ ಇಂದು ಮಧ್ಯಾಹ್ನ ನಡೆಯಿತು.


ಅನಾದಿಕಾಲದಿಂದಲೂ ನಡೆದುಕೊಂಡು ಬಂದಂತೆ ಮಾಣಿ ಶ್ರೀ ಉಳ್ಳಾಲ್ತಿ ದೈವದ ಮೆಚ್ಚಿ ಜಾತ್ರೆಯ ಮೊದಲು ಮಾಣಿ ಗ್ರಾಮದ ಉಳ್ಳಾಲ್ತಿ  ದೇವಸ್ಥಾನದ ವಠಾರದಲ್ಲಿ ಹಾಗೂ ಅರೆಬೆಟ್ಟು ವಿನಲ್ಲಿ ಒಂದೇ ದಿನ ವನ ಭೊಜನ ಕಾರ್ಯಕ್ರಮ ನಡೆಯುತ್ತದೆ.
ಅರೆಬೆಟ್ಟು ಗುತ್ತುವಿನಲ್ಲಿ ವರ್ಷಂಪ್ರತಿ ಯಂತೆ ಜರಗುವ ಕಂಬಳಕೋರಿಯಂದು ಈ ಎರಡು ಗ್ರಾಮದ ವನಭೋಜನಕ್ಕೆ ದಿನ ನಿಗದಿಯಾಗುತ್ತದೆ.
ಅ ಪ್ರಕಾರ ಒಂದೇ ದಿನ ಎರಡು ಕಡೆಗಳಲ್ಲೂ ವನಭೋಜನಕ್ಕೆ ಮೀಸಲಿರಿಸಿದ ಜಾಗದಲ್ಲಿ ಮಾಣಿಗುತ್ತು ಮತ್ತು ಅರೆಬೆಟ್ಟು ಗುತ್ತು ವಿನ ಮುಖ್ಯಸ್ಥ ರ ಮುಂದಾಳತ್ವ ದಲ್ಲಿ ಗ್ರಾಮಸ್ಥರ ಕೂಡುವಿಕೆಯಲ್ಲಿ ಜರಗುತ್ತದೆ.
ವನಭೋಜನ ಎಂದರೆ ಏನು:
ದಿನನಿಗದಿಯಂತೆ ಗ್ರಾಮದ ಭಕ್ತರು ದೈವದ ಗಣಗಳಿಗೆ ಹರಕೆಯ ರೂಪದಲ್ಲಿ ಅಗೆಲು ಸೇವೆ ನೀಡುವುದು ಇದರ ಉದ್ದೇಶ.
ಅ ದಿನದಂದು ಊರಿನ ಭಕ್ತರು ಹರಕೆಯ ರೂಪದಲ್ಲಿ ಕೋಳಿ , ಒಣ ಮೀನು, ಅಕ್ಕಿ, ತೆಂಗಿನಕಾಯಿ, ಹುರುಳಿ, ಇತ್ಯಾದಿಗಳನ್ನು ಹರಕೆಗೆಂದು ನೀಡುತ್ತಾರೆ .
ಕಾಡಿನ ಮದ್ಯದಲ್ಲಿ ಭಕ್ತರು  ಹರಕೆಯ ರೂಪದಲ್ಲಿ ನೀಡಿದ ವಸ್ತುಗಳನ್ನು ಅಲ್ಲೇ ತಯಾರಿಸಿ ಅಗೆಲು ರೂಪದಲ್ಲಿ ದೈವದ ಗಣಗಳಿಗೆ ಬಡಿಸಲಾಗುತ್ತದೆ. ಬಳಿಕ ಗ್ರಾಮಸ್ಥರು ಒಟ್ಟಿಗೆ ಪ್ರಸಾದದ ರೂಪದಲ್ಲಿ ಪಡೆದುಕೊಂಡು ಅಲ್ಲೇ ಕುಳಿತು ಊಟ ಮಾಡುತ್ತಾರೆ.

More articles

Latest article