


ಉಜಿರೆ: ಪಠ್ಯದಜೊತೆಗೆ ಪಠ್ಯೇತರ ಚಟುವಟಿಕೆಗಳಳ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ನಮ್ಮ ಪ್ರತಿಭೆ ಮತ್ತು ಸಾಮಥ್ರ್ಯಅಭಿವ್ಯಕ್ತಿಗೆ ಸೂಕ್ತ ಅವಕಾಶ ದೊರಕುತ್ತದೆ. ಆದರ್ಶ ವ್ಯಕ್ತಿತ್ವ ನಿರ್ಮಾಣಕ್ಕೆಇದು ಪ್ರೇರಕವಾಗಿದೆ ಎಂದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಯೋಜನಾ ನಿರ್ದೇಶಕ ಡಿ. ಶ್ರೇಯಸ್ ಕುಮಾರ್ ಹೇಳಿದರು.
ಅವರು ಬುಧವಾರ ಉಜಿರೆಯಲ್ಲಿಎಸ್.ಡಿ.ಎಂ.ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ರಾಷ್ಟ್ರೀಯ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಉತ್ಸವ ಝೇಂಕಾರ್ ಉದ್ಘಾಟಿಸಿ ಮಾತನಾಡಿದರು.
ಮುಕ್ತ ವಾತಾವರಣದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಮಧ್ಯೆ ಮಧುರ ಬಾಂಧವ್ಯ ಮೂಡಿಸಲು ಇಂತಹ ಉತ್ಸವಗಳು ಸಹಕಾರಿಯಾಗಿವೆ. ಪಠ್ಯಕ್ಕಿಂತಲೂ ಪಠ್ಯೇತರ ಚಟುವಟಿಕೆಗಳ ಮಧುರ ನೆನಪು ಜೀವನ ಪರ್ಯಂತ ಇರುತ್ತದೆ ಎಂದು ಅವರು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಟಿ.ಎನ್. ಕೇಶವ ಶುಭಾಶಂಸನೆ ಮಾಡಿದರು.
ಅಧ್ಯಕ್ಷತೆ ವಹಿಸಿದ ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಮಾತನಾಡಿ, ಜ್ಞಾನ ಮತ್ತು ಕೌಶಲ ಅಭಿವೃದ್ಧಿಗೆ ಸ್ಪರ್ಧೆಗಳು ಸಹಾಯಕವಾಗಿವೆ. ಇದರಿಂದ ನಮ್ಮ ಅನುಭವ ಹಾಗೂ ಗ್ರಹಣ ಶಕ್ತಿ ಹೆಚ್ಚಾಗುತ್ತದೆ ಎಂದು ಹೇಳಿದರು.
ಝೇಂಕಾರ್ನಲ್ಲಿ ಭಾಗವಹಿಸುವ ಸ್ಪರ್ಧೆಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ಸಂತಸ ಹಾಗೂ ಅಭಿಮಾನದ ವಿಚಾರವಾಗಿದೆ ಎಂದು ಹೇಳಿದರು. ಮನೋರಂಜನೆ ಜೊತೆಗೆ ಸಾಕಷ್ಟು ಜೀವನಾನುಭವ ಪಡೆಯಲು ಝೇಂಕಾರ್ ಸಹಕಾರಿಯಾಗಿದೆ ಎಂದರು.
ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡೀನ್ಡಾ. ಬಿ. ಗಣಪಯ್ಯ ಸ್ವಾಗತಿಸಿದರು. ಝೇಂಕಾರ್ ಸಂಚಾಲಕ ಪ್ರೊ. ಸುವೀರ್ಜೈನ ಧನ್ಯವಾದವಿತ್ತರು.





