Thursday, October 19, 2023

ವಿಟ್ಲ: ವರ್ಲಿ ಚಿತ್ರಕಲೆ ಕಾರ್ಯಾಗಾರ

Must read

ವಿಟ್ಲ: ಬಣ್ಣ ಮತ್ತು ವ್ಯಕ್ತಿ ಅದೊಂದು ಅವಿನಾಭಾವ ಸಂಬಂಧ. ಅದು ವಿದ್ಯಾರ್ಥಿ ಜೀವನದಲ್ಲಿ ಅತೀ ಹೆಚ್ಚು ಮೌಲ್ಯವನ್ನು ಪಡೆದುಕೊಳ್ಳುವಂತಹ ಕಲೆ. ಜೊತೆಗೆ ವಿದ್ಯಾರ್ಥಿಗಳಲ್ಲಿ ಏಕಾಗ್ರತೆಯನ್ನು ಹೆಚ್ಚಿಸುವಲ್ಲಿ ವರ್ಲಿಕಲೆ ಪೂರಕವಾಗಿರುತ್ತದೆ ಎಂದು ವಿಠಲ ವಿದ್ಯಾ ಸಂಘದ ಸಂಚಾಲಕ ಎಲ್.ಎನ್.ಕೂಡೂರು ತಿಳಿಸಿದರು.
ವಿಠಲ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಬಂಟ್ವಾಳ ತಾಲೂಕು ಚಿತ್ರಕಲಾ ಶಿಕ್ಷಕರಿಗಾಗಿ ನಡೆದ ವರ್ಲಿ ಕಾರ್‍ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಚೆನ್ನಕೇಶವ ಡಿ.ಆರ್. ಅವರು ಮಾತನಾಡಿ ಪ್ರತಿ ಶಾಲೆಯಲ್ಲೂ ವರ್ಲಿ ಕಲೆಯನ್ನು ಬೆಳೆಸಿದರೆ ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಅಕ್ಷರದ ಬರವಣಿಗೆಯು ಉತ್ತಮವಾಗಿರುತ್ತದೆ ಹಾಗೂ ಏಕಾಗ್ರತೆ ಹೆಚ್ಚುತ್ತದೆ ಜೊತೆಗೆ ಇದರಿಂದ ಶಾಲೆಯ ಚಟುವಟಿಕೆಗಳ ಬಗ್ಗೆ ತಿಳಿಯುತ್ತದೆ ಎಂದು ತಿಳಿಸಿದರು.
ಕಾರ್‍ಯಕ್ರಮದಲ್ಲಿ ದ.ಕ.ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಚೆನ್ನಕೇಶವ ಡಿ.ಆರ್, ಬಂಟ್ವಾಳ ತಾಲೂಕು ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಮುರಳೀಕೃಷ್ಣ ರಾವ್, ಆಡಳಿತ ಮಂಡಳಿಯ ಕೋಶಾಧಿಕಾರಿಗಳಾದ ಶ್ರೀ ನಿತ್ಯಾನಂದ ನಾಯಕ್, ಪ್ರಾಂಶುಪಾಲರಾದ ಆದರ್ಶ ಚೊಕ್ಕಾಡಿ, ವೈಸ್ ಪ್ರಿನ್ಸಿಪಾಲ್ ಕಿರಣ್ ಕುಮಾರ್, ಚಿತ್ರಕಲಾ ಶಿಕ್ಷಕರಾದ ಜಯಲಕ್ಷ್ಮೀ, ಅಮೀನಾ ಶೇಖ್, ಉಮೇಶ್, ಕಾರ್ಯಕ್ರಮದ ರೂವಾರಿ ತಾರಾನಾಥ ಕೈರಂಗಳ, ಉದಯ್ ವಿಟ್ಲ, ಧನಂಜಯ ಮತ್ತು ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್‍ಯಕ್ರಮವನ್ನು ಶಿಕ್ಷಕರಾದ ರಮೇಶ್ ಬಿ.ಕೆ ನಿರೂಪಿಸಿದರು. ವೈಸ್‌ಪ್ರಿನ್ಸಿಪಾಲ್ ಕಿರಣ್ ಕುಮಾರ್ ಸ್ವಾಗತಿಸಿದರು. ಚಿತ್ರಕಲಾ ಶಿಕ್ಷಕರಾದ ಉದಯ್ ವಿಟ್ಲ ವಂದಿಸಿದರು.

More articles

Latest article