ಬಂಟ್ವಾಳ: ಫರಂಗಿಪೇಟೆ ಯಲ್ಲಿ ರೈಲ್ವೆ ಇಲಾಖೆ ಮತ್ತು ಸ್ಥಳೀಯ ರ ನಡುವೆ ಮತ್ತೆ ವಿವಾದ ಉಂಟಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ, ಬಂಟ್ವಾಳ ಗ್ರಾಮಾಂತರ ಠಾಣಾ ಎಸ್.ಐ.ಪ್ರಸನ್ನ ಬಿಗಿಬಂದೋಬಸ್ತ್ ಏರ್ಪಡಿಸಿದ್ದಾರೆ.
ಕಳೆದ ವಾರ ಮೀನು ಮಾರುಕಟ್ಟೆ ಮತ್ತು ರೈಲ್ವೆ ಇಲಾಖೆಯವರ ಮಧ್ಯೆ ಜಾಗ ಅತಿಕ್ರಮಣ ಮಾಡಿದ್ದಾರೆ ಎಂಬ ಆರೋಪ ಮತ್ತು ಮೀನು ಮಾರುಕಟ್ಟೆಯ ಸ್ಥಳಾಂತರ ಮಾಡುವ ವಿಚಾರದಲ್ಲಿ ವಾದವಿವಾದಗಳು ನಡೆದ ಬಳಿಕ ಮೀನು ಮಾರುಕಟ್ಟೆ ಯನ್ನು ಅಲ್ಲಿಂದ ಸ್ಥಳಾಂತರ ಮಾಡಲಾಯಿತು.

      
ಅ ಬಳಿಕ ಇಂದು ರೈಲ್ವೆ ಇಲಾಖೆಯವರು ಸರ್ವೆ ಕಾರ್ಯ ಮುಗಿಸಿ ಜಮೀನಿನ ಮೇಲೆ ಬೇಲಿ ಹಾಕುವ ಕಾರ್ಯಕ್ಕೆ ಮತ್ತು ಜೆ.ಸಿ.ಬಿ.ಬಳಸಿ ಜಾಗದ ಗುರುತು ಮಾಡುವ ಕೆಲಸ ಪ್ರಾರಂಬಿಸಿದರು.
ಆದರೆ ರಾಷ್ಟ್ರೀಯ ಹೆದ್ದಾರಿ 75 ರ ಪರಂಗಿಪೇಟೆಯಲ್ಲಿ ರೈಲ್ವೆ ಇಲಾಖೆಯವರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾದಚಾರಿಗಳು ಹೋಗಲು ಸ್ಥಳ ಬಿಡದೆ ಜಾಗಕ್ಕೆ ಬೇಲಿ ಹಾಕಲು ಮುಂದಾಗಿರುವುದನ್ನು ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು.
ರೈಲ್ವೆ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಸ್ಥಳ ಕ್ಕೆ ಬೇಟಿ ನೀಡಿ ಸೂಕ್ತವಾದ ಕ್ರಮಗಳನ್ನು ಕೈಗೊಳ್ಳುವವರೆಗೂ ಕಾಮಗಾರಿಯನ್ನು ನಡೆಸದಂತೆ ತಡೆಹಿಡಿಯುವಂತೆ ಪಟ್ಟು ಹಿಡಿದಿದ್ದಾರೆ.
ಸ್ಥಳದಲ್ಲಿ ಕೆಲ ಹೊತ್ತು ಬಿಗುವಿನ ವಾತಾವರಣ ಉಂಟಾಗಿದ್ಧು ಪೋಲೀಸರು ಹೆಚ್ಚಿನ ಭದ್ರತೆ ಮಾಡಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here