


ಬಂಟ್ವಾಳ: ಟಿಪ್ಪರ್ ಲಾರಿ ಮತ್ತು -ಬೊಲೆರೊ ಕಾರು ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ ಸಜೀಪ ಮೂಡ ಗ್ರಾಮದ ಬೇಂಕ್ಯ ಎಂಬಲ್ಲಿ ನಡೆದಿದೆ.
ಡಿಕ್ಕಿಯ ರಭಸಕ್ಕೆ ಬೊಲೆರೋ ಎಡಬದಿ ಸಂಪೂರ್ಣ ಜಕಂಗೊಂಡಿದೆ. ಬೊಲೆರೋ ಚಾಲಕ ಪ್ರಾಣಪಾಯದಿಂದ ಪಾರಾಗಿದ್ದಾರೆ. ಚಾಲಕನೊಬ್ಬನೇ ಕಾರಿನಲ್ಲಿದ್ದು ಗಾಯವಿಲ್ಲದೆ ಸೇಪ್.
ಪ್ರವೀಣ್ ಮಾರ್ನಬೈಲ್ ಅವರ ಸಹೋದರ ಸೋಮನಾಥ್ ಅವರ ಬೊಲೆರೊ ವಾಹನ ಎಂದು ತಿಳಿದು ಬಂದಿದೆ.
ಮೆಲ್ಕಾರ್ ಟ್ರಾಫಿಕ್ ಎಸ್. ಐ.ಮಂಜುಳಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.







