


ಬಂಟ್ವಾಳ: ಡೀಸೆಲ್ ಟ್ಯಾಂಕ್ ರ್ ಪಲ್ಟಿಯಾಗಿ ಚಾಲಕ ಗಂಬೀರ ವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ಕಲ್ಲಡ್ಕ ಸಮೀಪದ ಪೂರ್ಲಿಪಾಡಿ ಎಂಬಲ್ಲಿ ನಡೆದಿದೆ.
ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಕಲ್ಲಡ್ಕ ಸಮೀಪದ ಪೂರ್ಲಿಪ್ಪಾಡಿ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡೀಸೆಲ್ ಲಾರಿಪಲ್ಟಿಯಾಗಿದೆ.
ಮಂಗಳೂರು ಕಡೆಯಿಂದ ಡೀಸೆಲ್ ಹೊತ್ತುಕೊಂಡು ಬೆಂಗಳೂರು ಕಡೆಗೆ ಸಾಗುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಡೀಸೆಲ್ ಲಾರಿ ಪಲ್ಟಿಯಾಗಿ ಚಾಲಕ ಲಾರಿಯಿಂದ ಕೆಳಗೆ ಎಸೆಯಲ್ಪಟ್ಟು ಗಂಬೀರ ಗಾಯಗಳಾಗಿದೆ.
ಗಾಯಗೊಂಡ ಚಾಲಕನನ್ನು ಮಂಗಳೂರು ಖಾಸಗಿಆಸ್ಪತ್ರಗೆ ದಾಖಲಿಸಲಾಗಿದೆ.
ಟ್ಯಾಂಕ್ ರ್ ಪಲ್ಟಿಯಾದ ರಭಸಕ್ಕೆ ಟ್ಯಾಂಕ್ ಒಡೆದು ಡೀಸೆಲ್ ಸೋರಿಕೆಯಾಗುತ್ತಿದ್ದು ಟ್ರಾಫಿಕ್ ಜಾಮ್ ಉಂಟಾಗಿದೆ.
ಕಾರೊಂದನ್ನು ಸೈಡ್ ಹೊಡೆಯುವ ಸಂಧರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಡಿಯಾಗಿದೆ ಎಂದು ಸ್ಥಳೀಯ ರು ಹೇಳುತ್ತಿದ್ದರೂ ಸ್ಪಷ್ಟ ವಾದ ಕಾರಣ ತಿಳಿದು ಬಂದಿಲ್ಲ
ಸ್ಥಳಕ್ಕೆ ಬಂಟ್ವಾಳ ವ್ರತ್ತ ನಿರೀಕ್ಷಕ ಟಿ.ಡಿ.ನಾಗರಾಜ್, ಬಂಟ್ವಾಳ ನಗರ ಠಾಣಾ ಎಸ್.ಐ.ಚಂದ್ರಶೇಖರ್ , ಮೆಲ್ಕಾರ್ ಟ್ರಾಫಿಕ್ ಎಸ್.ಐ.ಮಂಜುಳಾ ಹಾಗೂ ಅಗ್ನಿಶಾಮಕ ದಳದ ವರು ಅಗಮಸಿ ಮುಂಜಾಗ್ರತ ಕ್ರಮ ಕೈಗೊಂಡಿದ್ದಾರೆ





