ಬಂಟ್ವಾಳ: ಅಂಚೆ ಕಚೇರಿಯ ಜನರೇಟರ್ ನಲ್ಲಿದ್ದ ಬ್ಯಾಟರಿ ಯನ್ನು ಕಳವು ಮಾಡಿದ್ದಾರೆ ಎಂದು ಬಂಟ್ವಾಳ ನಗರ ಠಾಣೆಯಲ್ಲಿ ಗಂಗಾಭವಾನಿ ಅವರು ದೂರು ದಾಖಲಿಸಿದ್ದಾರೆ.
ಬಂಟ್ವಾಳ ತಾಲೂಕಿನ ಬಿಮೂಡ ಗ್ರಾಮದ ಅಂಚೆಕಚೇರಿಯಲ್ಲಿ ಇರುವ ಜನರೇಟರ್ ನ ಸುಮಾರು 5000 ಮೌಲ್ಯದ  ಬ್ಯಾಟರಿಯನ್ನು ಕಳವು ಮಾಡಿದ್ದಾರೆ.
ಇಂದು ಬೆಳಿಗ್ಗೆ ಕರೆಂಟ್ ಹೋದ ಸಂದರ್ಭದಲ್ಲಿ ಸಿಬ್ಬಂದಿ ಯವರು ಜನರೇಟರ್ ಸ್ಟಾರ್ಟ್ ಮಾಡಲು ಹೋದಾಗ ಅದು‌ ಸ್ಟಾರ್ಟ್ ಅಗದೆ ಇದ್ದಾಗ ರಿಪೇರಿಯವರನ್ನು ಕರೆಸಿ ಪರಿಶೀಲಿಸಿ ದಾಗ ಜನರೇಟರ್ ನ‌ಬ್ಯಾಟರಿ ಕಳವು ಅಗಿರುವುದು ಗಮನಕ್ಕೆ ಬಂದಿತ್ತು.
ಬಂಟ್ವಾಳ ನಗರ ಠಾಣಾ ಎಸ್.ಐ.ಚಂದ್ರಶೇಖರ್ ಬೇಟಿ ನೀಡಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here