Friday, October 27, 2023

ಶ್ರೀ ವಂಕಟರಮಣ ಸ್ವಾಮಿ ಪದವಿ ಮತ್ತು ಪದವಿ ಪೂರ್ವ ಕಾಲೇಜಿನ ಪ್ರತಿಭಾ ಪುರಸ್ಕಾರ ಸಮಾರಂಭ

Must read

ಬಂಟ್ವಾಳ: ಪ್ರತಿಯೊಬ್ಬ ವ್ಯಕ್ತಿಯೂ ಸಮಾಜ ಜೀವಿ. ಸಮಾಜದಿಂದ ಮುಕ್ತನಾಗಿ ಯಾರೂ ಬದುಕಲು ಸಾಧ್ಯವಿಲ್ಲ. ವ್ಯಕ್ತಿಯೊಬ್ಬನ ಪ್ರತಿಯೊಂದು ಹಂತದ ಬೆಳವಣೆಯಲ್ಲೂ ಸಮಾಜದ ಋಣವು ನಿಗೂಢವಾಗಿದೆ. ಈ ಋಣವನ್ನು ಪ್ರತಿಯೊಬ್ಬನೂ ಒಂದಲ್ಲ ಒಂದು ರೀತಿಯಲ್ಲಿ ತೀರಿಸಬೇಕು ಎಂದು ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಮ್ಯಾನೇಜಿಂಗ್ ಟ್ರಸ್ಟಿ, ಕನ್ನಡ ರಾಜ್ಯೋತ್ಸವ ಪ್ರಸಸ್ತಿ ಪುರಸ್ಕೃತ  ಕೃಷ್ಣ ಕುಮಾರ್ ಪೂಂಜ ಹೇಳಿದರು.
ಅವರು ಇಂದು ಬಂಟ್ವಾಳದ ಶ್ರೀ ವಂಕಟರಮಣ ಸ್ವಾಮಿ ಪದವಿ ಮತ್ತು ಪದವಿ ಪೂರ್ವ ಕಾಲೇಜಿನ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ದರಿದ್ರ ನಾರಾಯಣನ ಸೇವೆಯೇ ನಿಜವಾದ ಸೇವೆ. ಇಂತಹ ಸೇವೆಯನ್ನು ಮಾಡುವ ಅವಕಾಶವನ್ನು ಪ್ರತಿಯೊಬ್ಬನು ಪಡೆದುಕೋಳ್ಳಬೇಕು. ವಿದ್ಯಾರ್ಥಿಗಳಾದವರು ಸಮಾಜ ಸೇವೆಯ ಅಗತ್ಯದ ಕುರಿತು ಜಾಗೃತಿ ಮೂಡಿಸಬೇಕು. ವಿದ್ಯಾಭ್ಯಾಸ ಎನ್ನುವುದು ಸಂಸ್ಥೆಯೊಂದು ಸಮಾಜದ ಮೂಲಕ ನೀಡುವ ಕೊಡುಗೆ ಇದನ್ನು ಪ್ರತಿಯೊಬ್ಬ ವಿದ್ಯಾರ್ಥಿ ಅರಿತಿರಬೇಕು ಎಂದವರು ಕರೆಯಿತ್ತರು.
ಪದವಿ ಕಾಲೇಜು ಪ್ರಾಂಶುಪಾಲರಾದ ಡಾ| ಪಾಂಡುರಂಗ ನಾಯಕ್ ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ಕಾಲೇಜಿನ ಉಪ ಪ್ರಾಂಶುಪಲರದ ಡಾ. ಹೆಚ್ ಆರ್ ಸುಜಾತ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶಶಿಕಲಾ .ಕೆ ವಂದಿಸಿದರು. ಉಪನ್ಯಾಸಕರಾದ ಪ್ರೊ. ಶಾಂತಿ ರೋಚಿ ಬಹುಮಾನ ವಿತರಣಾ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿನಿ ಪ್ರತೀಕಾ ಜೆ. ಕಾರ್ಯಕ್ರಮ ನಿರೂಪಿಸಿದರು.

More articles

Latest article