ಬಂಟ್ವಾಳ: ಆಯುಷ್ ಇಲಾಖೆ ವತಿಯಿಂದ ಬಂಟ್ವಾಳ ತಾಲೂಕು ಪಂಚಾಯತ್ ಎಸ್ .ಜಿ.ಎಸ್.ವೈ ಸಭಾಂಗಣದಲ್ಲಿ ಆಶಾ ಕಾರ್ಯಕರ್ತೆಯರಿಗೆ ಒಂದು ದಿನದ ಆಯುಷ್ ಕಾರ್ಯಗಾರ ಡಾ| ಕೆ.ಎ.ಮಣಿಕರ್ಣಿಕ ಅವರ ನೇತ್ರತ್ವದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರು ವಹಿಸಿದ್ದರು.
ಬಳಿಕ ಕಾರ್ಯಗಾರದಲ್ಲಿ ಮಾತನಾಡಿದ ಚಂದ್ರಹಾಸ ಕರ್ಕೇರ ಆಯುಷ್ ಪದ್ದತಿ ಯಲ್ಲಿ ಮಾನವನ ದೇಹದ ಆರೋಗ್ಯ ರಕ್ಷಣೆ , ರೋಗ ಬಾರದಂತೆ ತಡೆಗಟ್ಟುವಲ್ಲಿ ದೇಹದ ರೋಗ ನಿರೋಧಕ ಶಕ್ತಿಯನ್ನು ವ್ರದ್ದಿಸುವ ಅನೇಕ ವಿಧಾನಗಳನ್ನು ಜನಸಮುದಾಯದ ಆರೋಗ್ಯ ರಕ್ಷಣೆ ಯ ಜವಾಬ್ದಾರಿ ಹೊತ್ತಿರುವ ಆಶಾ ಕಾರ್ಯಕರ್ತೆ ಯರು, ಅಂಗನವಾಡಿ ಕಾರ್ಯಕರ್ತರು ತಿಳಿದುಕೊಂಡು ಸಮುದಾಯಕ್ಕೆ ತಲುಪಿಸುವಂತಹ ಕಾರ್ಯಕ್ರಮ ವಾಗಬೇಕು ಎಂದರು.
ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಮೀ ಸಿ. ಬಂಗೇರ, ತಾ.ಪಂ.ಇ.ಒ.ರಾಜಣ್ಣ, ಸಂಪನ್ಮೂಲ ವ್ಯಕ್ತಿ ಉಪನ್ಯಾಸಕಿ ನಿಕಿತಾ ಸಿಬಿಲ್ ರೆಬೆಲ್ಲೊ, ಡಾ| ಪ್ರಸನ್ನ ರಾಕುಂಜ, ಡಾ| ಜ್ಯೋತಿ ಉಳಿಪ್ಪಾಡಿ ಮತ್ತಿತರ ರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here