ಬಂಟ್ವಾಳ : ಅತ್ಯಂತ ಕಾರಣಿಕ ಕ್ಷೇತ್ರವೆಂದು ಪ್ರಸಿದ್ಧಿ ಪಡೆದ ಬಂಟ್ವಾಳ ತಾಲೂಕು ಉಳಿ ಗ್ರಾಮದ ಕಕ್ಯಬೀಡು ಶ್ರೀ ಚದುರ್ಗಾಪರಮೇಶ್ವರೀ ದೇವಿ ಕ್ಷೇತ್ರದ ವರ್ಷಾವಧಿ ಜಾತ್ರೆ ಆರಂಭಗೊಂಡಿದ್ದು, ಜ.19ರ ವರೆಗೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ವಿಜೃಂಭಣೆಯಿಂದ ಜರಗಲಿದೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಉಳಿ ದಾಮೋದರ ನಾಯಕ್ ಅವರು ತಿಳಿಸಿದ್ದಾರೆ.


ಸಂಜೆ ನೂತನ ಬ್ರಹ್ಮರಥ ಸಮರ್ಪಣೆ, ಧಾರ್ಮಿಕ ಸಭೆ, ರಾತ್ರಿ ಉತ್ಸವಗಳು ನಡೆಯಲಿದೆ. ಜ.15 ರಂದು ಬೆಳಗ್ಗೆ ಚಂಡಿಕಾಹೋಮ, ಮಧ್ಯಾಹ್ನ ಮಹಾಪೂಜೆ, ಸಂಜೆ ಚೆಂಡು, ರಾತ್ರಿ ಉತ್ಸವ. ಜ.೧೬ ರಂದು ಬೆಳಗ್ಗೆ 108 ತೆಂಗಿನಕಾಯಿ ಗಣಹೋಮ, ಮಧ್ಯಾಹ್ನ ಮಹಾಪೂಜೆ, ಸಂಜೆ ಚೆಂಡು, ರಾತ್ರಿ ಬಾರ್‍ದಡ್ ಗುತ್ತಿನಿಂದ ಶ್ರೀ ಕಡಂಬಿಲ್ತಾಯ ಮತ್ತು ಕೊಡಮಣಿತ್ತಾಯ ದೈವಗಳ ಭಂಡಾರ ಬರುವುದು, ಬೋಂಟ್ರರ ಕಕ್ಯಗುತ್ತಿನಿಂದ ದೈವದ ಭಂಡಾರ ಬಂದು ನೇಮ, ಉತ್ಸವಗಳು. ಜ.17 ರಂದು ಬೆಳಗ್ಗೆ ದೈವಗಳ ತಂಬಿಲಗಳು, ಮಧ್ಯಾಹ್ನ ಮಹಾಪೂಜೆ, ಸಂಜೆ ದೇವರ ಪೇಟೆ ಸವಾರಿ, ಉತ್ಸವ, ಭೂತಬಲಿ, ಕವಾಟ ಬಂಧನ, ಶಯನ.

ಜ.18 ರಂದು ಕವಾಟೋದ್ಘಾಟನೆ, ದಿವ್ಯದರ್ಶನ, ಚೂಣೋತ್ಸವ, ತುಲಾಭಾರ, ದರ್ಶನಬಲಿ, ಬಟ್ಟಲುಕಾಣಿಕೆ, ಮಹಾಪೂಜೆ, ಜ.19 ರಂದು ಸಂಪ್ರೋಕ್ಷಣೆ, ಮಹಾಪೂಜೆ, ಮಂತ್ರಾಕ್ಷತೆಯೊಂದಿಗೆ ಮಂಗಳ. ಬೆಳಗ್ಗೆ ಕಕ್ಯಬೀಡು ಮೂಲ ಚಾವಡಿಯಲ್ಲಿ ನೇಮ ಭಂಡಾರ ಇಳಿಯುವುದು.
ಪ್ರತಿದಿನ ಅನ್ನ ಸಂತರ್ಪಣೆ, ರಾತ್ರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here