ಬಂಟ್ವಾಳ: ಗಿಳಿಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯೋರ್ವನನ್ನು ಬೆಂಗಳೂರು ಸಿ.ಐ.ಡಿ.ಪೋಲೀಸರು ಬಂಟ್ವಾಳದಲ್ಲಿ ಶುಕ್ರವಾರ ರಾತ್ರಿ ಬಂಧಿಸಿದ್ದಾರೆ.ಬಂಟ್ವಾಳ ತಾಲೂಕಿನ ನಾವೂರ ಗ್ರಾಮದ ಅಬ್ದುಲ್ ಲತೀಪ್ ಎಂಬವರು ಬಂಧಿತ ಆರೋಪಿ.
ಬಂಟ್ವಾಳ ತಾಲೂಕಿನ ಮೆಲ್ಕಾರ್  ಎಂಬಲ್ಲಿ ಎರಡು ಪಂಜರದಲ್ಲಿ ಸುಮಾರು 26 ಜೀವಂತ ಗಿಳಿಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ವೇಳೆ ಬೆಂಗಳೂರು ಸಿ.ಐ.ಡಿ.ಎಸ್.ಐ.ಹೆಚ್.ಕೆ.ರವಿಕುಮಾರ್ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಿದ್ದಾರೆ.
ಅಬ್ದುಲ್ ಲತೀಪ್ ಅವರು ತಮಿಳುನಾಡಿನಿಂದ ಗಿಳಿಗಳನ್ನು ತರಿಸಿ ಈ ಹಿಂದೆ ಅನೇಕ ಗಿಳಿಗಳ ಮಾರಟ ಮಾಡುತ್ತಿದ್ದ ಬಗ್ಗೆ ಮಾಹಿತಿಯ ಮೇರೆಗೆ ದಾಳಿ ನಡೆಸಿದ್ದಾರೆ. ‌
ನಿನ್ನೆ ರಾತ್ರಿ ಖಚಿತ ಮಾಹಿತಿಯ ಮೇಲೆ ಬಂಟ್ವಾಳಕ್ಕೆ ಅಗಮಿಸಿದ ಬೆಂಗಳೂರು ಸಿ.ಐ.ಡಿ.ಪೋಲೀಸರು  ಮೆಲ್ಕಾರ್ ಎಂಬಲ್ಲಿ ಗಿಳಿಗಳನ್ನು ಮಾರಾಟ ಮಾಡಲು ಪ್ರಯತ್ನಿಸುರುವ ವೇಳೆ ರೆಡ್ ಹ್ಯಾಂಡ್ ಅಗಿ ಬಂಧಿಸಿದ್ದಾರೆ.ಬಳಿಕ ಅವರು ಬಂಟ್ವಾಳ ವಲಯ ಅರಣ್ಯಾಧಿಕಾರಿಯವರಿಗೆ ಪ್ರಕರಣವನ್ನು ಹಸ್ತಾಂತರ ಮಾಡಿದ್ದಾರೆ.ವನ್ಯ ಜೀವಿ ಸಂರಕ್ಷಣಾ ಕಾಯ್ದೆ 1072 ರಡಿಯಲ್ಲಿ ಕೇಸು ದಾಖಲಿಸಿ ಬಂಟ್ವಾಳ ವಲಯ ಅರಣ್ಯ ಅಧಿಕಾರಿಗಳು 26 ಜೀವಂತ ಗಿಳಿಗಳನ್ನು ಹಾಗೂ ಆರೋಪಿ ಗಳನ್ನು ಬಂಟ್ವಾಳ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಮುಂದಿನ ತನಿಖೆಯನ್ನು ಮಂಗಳೂರು ಅರಣ್ಯ ಸಂರಕ್ಷಣಾಧಿಕಾರಿ ಶಂಕರೇ ಗೌಡ ಅವರು ನಡೆಸುತ್ತಿದ್ದಾರೆ.
ಈ ಕಾರ್ಯಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಬಿ.ಸುರೇಶ್, ಉಪವಲಯ ಅರಣ್ಯಾಧಿಕಾರಿ ಯಶೋಧರ, ಪ್ರೀತಂ, ಅರಣ್ಯ ರಕ್ಷಕರಾದ ವಿನಯ್, ಜಿತೇಶ್ ಬಿ. ದಯಾನಂದ, ಮತ್ತು ಸಿಬ್ಬಂದಿವರು ಹಾಜರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here