



ವಿಟ್ಲ: ಇಡ್ಕಿದು ಗ್ರಾಮದ ಅಳಕೆಮಜಲು ಸೂರ್ಯ ರಸ್ತೆಯ ವಡ್ಯರ್ಪೆ ಎಂಬಲ್ಲಿ 2017-18ನೇ ಸಾಲಿನ ಮಲೆನಾಡು ಪ್ರದೇಶ ಅಭಿವೃದ್ದಿ ಯೋಜನೆಯಡಿ 15 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುವ ಸೇತುವೆ ಕಾಮಗಾರಿಗೆ ಪುತ್ತೂರು ಶಾಸಕ ಸಂಜೀವ ಮಠಂದೂರು ಸೇತುವೆ ಶಂಕುಸ್ಥಾಪನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಪುಣಚ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯರಾದ ಜಯಶ್ರೀ ಕೋಡಂದೂರು, ಇಡ್ಕಿದು ಕ್ಷೇತ್ರದ ತಾಲೂಕು ಪಂಚಾಯಿತಿ ಸದಸ್ಯರಾದ ವನಜಾಕ್ಷಿ.ಎಸ್.ಭಟ್, ಪಂಚಾಯಿತಿ ಅಧ್ಯಕ್ಷರಾದ ಚಂದ್ರಾವತಿ, ಇಂಜಿನಿಯರುಗಳಾದ ಪದ್ಮರಾಜ ಗೌಡ, ಪಿಡಿಒ ಗೋಕುಲ್ದಾಸ್ ಭಕ್ತ, ಪಂಚಾಯಿತಿ ಸದಸ್ಯರಾದ ಚಿದಾನಂದ ಪೆಲತ್ತಿಂಜ, ಜಯರಾಮ ಕಾರ್ಯಾಡಿಗುತ್ತು, ಸತೀಶ್ ಕೆಂರ್ದೆಲು, ಹಿಮಾಕರ ಗಾಣಿಗ, ವಸಂತಿ, ಜಗದೀಶ್ವರಿ, ಕೇಶವ ಉರಿಮಜಲು, ಕೋಲ್ಪೆ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರರಾದ ಕೆ.ಎಸ್.ಸುರೇಶ್ ಮುಕ್ಕುಡ, ಗುತ್ತಿಗೆದಾರರಾದ ನೌಫಲ್, ಸ್ಥಳಿಯರಾದ ಲತೀಫ್ ಕೋಲ್ಪೆ, ಪದ್ಮನಾಭ ಕೊಡಂಚರಪಾಲು, ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ಪಂಚಾಯಿತಿ ಉಪಾಧ್ಯಕ್ಷ ಎಂ.ಸುಧೀರ್ ಕುಮಾರ್ ಶೆಟ್ಟಿ ಪ್ರಸ್ತಾವಿಸಿ ವಂದಿಸಿದರು.





