ಬಂಟ್ವಾಳ: ಪ್ರಧಾನ ಮಂತ್ರಿ ಉಜ್ವಲ ಯೋಜನೆ ಯಡಿ ಜನವರಿ 15 ರೊಳಗೆ ಎಲ್ಲಾ ಬಿ.ಪಿಎಲ್ ಪಡಿತರ ಚೀಟಿದಾರರಿಗೆ ಅಡುಗೆ ಅನಿಲ ಸಂಪರ್ಕ ನೀಡಲು ಕೇಂದ್ರ ಸರಕಾರ ಉದ್ದೇಶಿಸಿದ್ದು ಜಿಲ್ಲೆಯಲ್ಲಿ ಅಡುಗೆ ಅನಿಲ ಸಂಪರ್ಕ ಪಡೆಯದ ಬಿ.ಪಿ.ಎಲ್ ಪಡಿತರ ಚೀಟಿ ಹೊಂದಿರುವವರು ತಮ್ಮ ಮನೆಗಳಿಗೆ ಅನಿಲ ಸಂಪರ್ಕ ಬಯಸುವವರು ಪಡಿತರ ಚೀಟಿಯಲ್ಲಿನ ಕುಟುಂಬದ ಒಬ್ಬ ಮಹಿಳೆಯ ಎರಡು  ಭಾವಚಿತ್ರ ಆಧಾರ್ ಪ್ರತಿ ರಾಷ್ಟ್ರೀಕೃತ ಬ್ಯಾಂಕ್ ಪಾಸ್ ಪುಸ್ತಕ ಪ್ರತಿ, ಹಾಗೂ ಪಡಿತರ ಚೀಟಿಯಲ್ಲಿನ 18 ವರ್ಷಕ್ಕಿಂತ ಮೇಲ್ಪಟ್ಟ ( ಮೃತರು, ಮದುವೆಯಾದವರು, ವಲಸೆ ಹೋದವರು ಹೊರತುಪಡಿಸಿ), ಸದಸ್ಯರೆಲ್ಲರ ಆಧಾರ್ ಕಾರ್ಡ್ ಪ್ರತಿಯನ್ನು ಹತ್ತಿರದ ಯಾವುದೇ ಎಲ್.ಪಿ.ಜಿ.ಗ್ಯಾಸ್ ಏಜೆನ್ಸಿಗೆ ನೀಡಿ ಅಥವಾ ಸ್ಥಳೀಯ  ಗ್ರಾ.ಪಂ.ಗೆ ದಾಖಲೆ ಗಳನ್ನು ನೀಡಿ ಪ್ರಯೋಜನ ಪಡೆಯಲು ಬಂಟ್ವಾಳ ತಾಲೂಕಿನ ತಾ.ಪಂ.ಸದಸ್ಯ ಪ್ರಭಾಕರ ಪ್ರಭು ವಿನಂತಿ ಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here