


ವಿಟ್ಲ : ವಿಟ್ಲದ ನಿವಾಸಿ ರಾಜ್ಯ ಹೈಕೋರ್ಟಿನ ಯುವ ನ್ಯಾಯವಾದಿಯೊಬ್ಬರು ಅಲ್ಪದಿನಗಳ ಅನಾರೋಗ್ಯದಿಂದಾಗಿ ಮೃತಪಟ್ಟಿದ್ದಾರೆ.
ವಿಟ್ಲ ಕಸಬಾ ಗ್ರಾಮದ ಕಾಂತಡ್ಕ ನಿವಾಸಿ ಕೆ.ಎ.ಹಸೈನಾರ್ ಪುತ್ರ ಯುವ ನ್ಯಾಯವಾದಿ ಮಹಮ್ಮದ್ ಶಾಫಿ(24)ಮೃತಪಟ್ಟವರು. ಪುತ್ತೂರು ವಿವೇಕಾನಂದ ಕಾನೂನು ವಿದ್ಯಾಲಯದಲ್ಲಿ ವ್ಯಾಸಂಗ ಮುಗಿಸಿದ್ದ ಶಾಫಿ ಇತ್ತೀಚೆಗಷ್ಟೆ ರಾಜ್ಯ ಹೈಕೋರ್ಟಿನ ಹಿರಿಯ ನ್ಯಾಯವಾದಿಯೊಬ್ಬರ ಜೊತೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದರು. ಕೆಲದಿನಗಳ ಹಿಂದಷ್ಟೆ ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡಿದ್ದ ಕಾರಣ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ ಆಸ್ಪತ್ರೆಯಲ್ಲಿ ಶಾಫಿಯವರು ಮೃತಪಟ್ಟಿದ್ದಾರೆ. ಮೃತರು ತಂದೆ, ತಾಯಿ, ಇಬ್ಬರು ಸಹೋದರರು ಮತ್ತು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.





