ವಿಟ್ಲ: ಆಪ್ ಮೂಲಕ ನೋಂದಾವಣೆ ಮಾಡಿಕೊಳ್ಳುವ ಸೌಲಭ್ಯವನ್ನು ವಿಟ್ಲದಲ್ಲಿ ಪ್ರಥಮವಾಗಿ ಅಳವಡಿಸಿಕೊಂಡಿರುವುದು ದೂರದ ಊರುಗಳಿಂದ ತಪಾಸಣೆಗೆ ಬರುವ ರೋಗಿಗಳಿಗೆ ಅನುಕೂಲಕರವಾಗುವ ದೃಷ್ಟಿಯಿಂದ ಸಕಾಲಿಕವಾಗಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ವೈದ್ಯ ಡಾ.ಕೆ.ಜಿ.ಭಟ್ ಅಭಿಪ್ರಾಯ ಪಟ್ಟರು.
ಅವರು ವಿಟ್ಲ ಬೆನಕ ಕ್ಲಿನಿಕ್‌ನಲ್ಲಿ ನೂತನ ಸಮವಸ್ತ್ರ ವಿತರಣಾ ಕಾರ್‍ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಟ್ಲ ಸುರಕ್ಷಾ ಹೆಲ್ತ್ ಕ್ಲಿನಿಕ್‌ನ ವೈದ್ಯ ಡಾ. ಗೀತಪ್ರಕಾಶ್ ಆಪ್ ನೋಂದಾವಣಾ ಸೌಲಭ್ಯ ಲೋಕಾರ್ಪಣೆಗೊಳಿಸಿ ಮಾತನಾಡಿ, ವೈದ್ಯರು ಮತ್ತು ರೋಗಿಗಳ ಮಧ್ಯೆ ಉತ್ತಮ ಬಾಂಧವ್ಯವಿರಬೇಕು. ಗುಣಮಟ್ಟದ ಚಿಕಿತ್ಸೆಗೆ ಶುಲ್ಕವೂ ಅಧಿಕವಾಗಿರುತ್ತದೆ ಎಂಬ ವಿಚಾರವನ್ನು ರೋಗಿಗಳ ಕುಟುಂಬದವರು ಅರ್ಥೈಸಿಕೊಳ್ಳಬೇಕೆಂದು ತಿಳಿಸಿದರು.
ಮಂಗೇಶ್ ಭಟ್ ಪ್ರಾರ್ಥನೆ ಹಾಡಿದರು. ಬೆನಕ ಕ್ಲಿನಿಕ್‌ನ ಡಾ. ಅರವಿಂದ್ ಸ್ವಾಗತಿಸಿ, ಪ್ರಸ್ತಾವಿಸಿದರು. ಡಾ. ಶಿವಕುಮಾರ್ ವಂದಿಸಿದರು. ಪುಷ್ಪ ಕಾರ್‍ಯಕ್ರಮ ನಿರೂಪಿಸಿದರು. ಕ್ಲಿನಿಕ್‌ನ ಸಿಬ್ಬಂದಿಗಳಾದ ಸೌಮ್ಯ, ಚಿಂತನ, ಗುಲಾಬಿ, ವನಿತ, ಶಶಿ, ಚಿತ್ರ, ಗಂಗಾಧರ, ಭಾರತಿ, ವನಜ, ಹರೀಶ್ ಸಹಕರಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here