

ವಿಟ್ಲ: ಮೂಡುಬಿದಿರೆಯಲ್ಲಿ ನಡೆದ ವಿಶೇಷ ಸಾಮರ್ಥ್ಯವುಳ್ಳ 17 ವರ್ಷ ವಯೋಮಾನದ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಅಳಿಕೆ ಸತ್ಯಸಾಯಿ ಪ್ರೌಢ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿ ಶ್ರೀಕೃಷ್ಣ ಕೆ ಕಾಶಿಮಠ ಇವರು 1000 ಮೀಟರ್ ಓಟ ಮತ್ತು ಗುಂಡೆಸೆತದಲ್ಲಿ ಚಿನ್ನದ ಪದಕ ಪಡೆದು ಶಿರಸಿಯಲ್ಲಿ ನಡೆಯುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ. ಇವರ ಅಳಿಕೆ ಸತ್ಯಸಾಯಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ರಘು ಟಿ ವೈ ಇವರ ನೇತೃತ್ವದಲ್ಲಿ ದೈಹಿಕ ಶಿಕ್ಷಕ ವಸಂತ ಇವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.








