



ನೀವು ಯಾರೆತ್ತ ಮಗನೋ… ಏನೋ.. ನಿಮ್ಮನ್ನು ಹೊತ್ತವಳು ಮಾತ್ರ ಭಾರತಿ.
ನಿಮ್ಮನ್ನು ಹೊತ್ತವಳಿಗಾಗಿ ಹೆತ್ತವಳನ್ನು ಬಿಟ್ಟು ನಿಮ್ಮ ಹೊತ್ತಳಿಗಾಗಿ ತನ್ನ ಪ್ರಾಣವನ್ನು ಮುಡಿಪಾಗಿಟ್ಟ ನಿಮಗಿದೋ… ಕೋಟಿ ನಮನ.
ನಿಮ್ಮನ್ನು ಕಂಡರೆ ಅಸೂಯೆ ನಮಗಿಂದು.
ನಿಮ್ಮಷ್ಟು ಪುಣ್ಯ ಮಾಡಿಹುಟ್ಟಲಿಲ್ಲ ಎಂದು.
ನಿಮ್ಮಷ್ಟು ಅದೃಷ್ಟವಂತರಲ್ಲ ನಾವು.
ನಮ್ಮ ತಾಯ್ನಾಡಿಗಾಗಿ ಎದೆಯೊಡ್ಡಿ ಹೋರಾಡೋಕೆ ನಾವು.
ಹೋರಾಡೋಕೆ ಬೇಕಿರುವುದು ತೋಳಿನಲ್ಲಿ ಶಕ್ತಿಯಲ್ಲ ಹೃದಯದಲ್ಲಿ ದೇಶಾಭಿಮಾನ.
ಆ ದೇಶಾಭಿಮಾನ ದಿಂದ ಹೋರಾಡುತ್ತಿರುವ ಸೈನಿಕರಿಗೆ ಎನ್ನ ನಮನ.
ಜುಲೈ 26 ರಂದು ನಿಮಗಾಗಿ ಮಿಡಿಯುವುದು ನಮ್ಮ ಹೃದಯ.
ಅದರ ಪರಿಣಾಮವಾಗಿ ನಮ್ಮ ಕಣ್ಣಂಚಿನಲ್ಲಿ ಸುರಿಯುತ್ತಿದೆ ಕಣ್ಣೀರ ಹನಿ.
ನೀವು ನಮಗಾಗಿ ಕೊಟ್ಟರಂದು ಕಾರ್ಗಿಲ್ ನಲ್ಲಿ ರಕ್ತದ ಹನಿ.
ನಾವು ಮಾತ್ರ ಕೊಡಬಲ್ಲೆವು ನಿಮಗೆ ಕಣ್ಣೀರ ಹನಿ.
ನೀವಂದು ಕಾರ್ಗಿಲ್ ನ ಆ ಚಳಿಯಲ್ಲಿ ಹೋರಾಡಿದ್ದರಿಂದ.
ಇಂದು ಇಡಿ ಭಾರತಾಂಬೆಯ ಮಕ್ಕಳು ಬೆಚ್ಚಗೆ ಇರುವರು ನಿಮ್ಮ ಹೋರಾಟದಿಂದ.
ಇದೊ… ನಿಮಗೆ ನಮಿಸುವೆವು ನಾವಿಂದು.
ನಮ್ಮ ಕಾರ್ಗಿಲ್ ವಿಜಯೋತ್ಸವದಂದು.
- ಗಿರೀಶ್ ತುಳಸೀವನ







