






ಈಗಷ್ಟೇ ಮೈ ನೆರೆದು
ಆಗುತೈತೆ ಹೆಂಗ ಹೆಂಗೋ…
ಹಾಕಿ ಬಿಡಿ ನಿಮ್ಮ ಕಣ್ಣು
ನೋಡಿ ಬಿಡೋಣ ಹಂಗೂ ಹಿಂಗೂ…
ನಾ ಬಂದಿರುವೆ ನಿಮಗೆಂದೆ
ನಿಮ್ಮ ಬಯಕೆ ಸುಗ್ಗಿಯ ಸಿಗ್ಗು…
ತೆಗೆದುಕೊಂಡರೂ ವಾರಕ್ಕೈದು ಬಟ್ಟೆ
ಎರಡೇ ದಿನಕ್ಕೆ ಪುಲು ಟೈಟು…
ನಿಲ್ಲದು ಮೈಮೇಲೆ ತೊಟ್ಟೆನು ಮಾಡಲಿ
ಗಲ್ಲಿ ಗಲ್ಲಿಯಲ್ಲಿ ಬಿಚ್ಚಿಡಿ ಎಂದು ಗುಲ್ಲು…
ಮೇಲಿಂದ ಮೇಲೆ ಬಳುಕುವ ಅಂಗಾಂಗ
ಸದ್ದು ಮಾಡುವ ಸುದ್ದಿ ನಂದೇನೆ ಎಲ್ಲೆಲ್ಲೂ…
ಬಲು ಘಾಟಿ ಗುಂಗು ಎಣ್ಣೆ
ಸುಖ ಸೂರೆ ಹೊಡೆಯುವ ಸನ್ನೆ…
ಬೇಕಾಬಿಟ್ಟಿ ಮುಟ್ಟಾಡಬೇಡಿ
ಅಡ್ಡಾದಿಡ್ಡಿ ಸೊಂಟವೂ ಸೊನ್ನೆ…
ಹಿಂದೆ ಮುಂದೆ ಬಾರಿ ನಾಟಿ ಹಣ್ಣೆ
ಹಿಗ್ಗಾಮುಗ್ಗಾ ಹಸಿಬಿಸಿ ಬೆಣ್ಣೆ…
ಕಣ್ಣಾಮುಚ್ಚಾಲೆಗೆ ಕರೆದು ಕೋಕೋ ಆಡಿ
ಎಲ್ಲೆಂದರಲ್ಲಿ ಹಿಡಿದು ರಮಿಸಿ ನನ್ನ…
ಲಂಗು ಲಗಾಮಿಲ್ಲದ ಬೆದರು ಲಗೋರಿ
ಸುರುಳಿ ಸುತ್ತಿ ಬೀಸಿರಿ ಬುಗರಿಯನ್ನ…
ಚೆಲ್ಲು ಚೆಲ್ಲಾಗಿ ಸುರಿಸಿ ಪೋಲಿ ಜೊಲ್ಲು
ಹೇಗೆಂದರೆ ಹೇಗೆ ಸುನಾಮಿ ಈ ಯೌವನ…

ಬಸವರಾಜ ಕಾಸೆ





