Tuesday, October 17, 2023

ಗಜಲ್ 68

Must read

ಕೆದರಿದ ಕೂದಲು ಕುರುಚಲು ಗಡ್ಡ ಕಾಂತಿ ಹೀನ ಕಣ್ಣು ಸಿಗದ ಗುರುತು ಇವತ್ತು/
ನೀನೇ ಪ್ರಾಣ ಎಂದುಕೊಂಡ ಜೀವವಾ ಇಷ್ಟು ಬೇಗ ಮರೆತು ಹೋದ ಕುತ್ತು//

ಅಂದುಕೊಂಡಿದ್ದೆ ಮತ್ತೆ ಸಿಗದೆಂದು ನಿನ್ನ ದರ್ಶನ ಭಾಗ್ಯ ಸಿಕ್ಕಿಯೇ ಬಿಟ್ಟಿಯಾ/
ನೋಡಿಯೂ ನೋಡದಂತೆ ಹೋಗಲು ತಡವರಿಸಿದ ನಡೆ ಸ್ತಬ್ಧ ಕ್ಷಣ ಹೊತ್ತು//

ನನ್ನ ಪಾಡು ಬಿಡು ಬೇಡವೆಂದರೂ ಏನೋ ನೀ ದಯೆ ಪಾಲಿಸಿದ ವರ/
ಕೇಳಿಕೊಂಡು ಬಂದಿರಬೇಕು ಇದಕ್ಕೂ ಜಾಗೃತ ಒಳನೋವು ಅನಾಮತ್ತು//

ಮತ್ತೆ ನೋಡದೆ ನಿನ್ನಷ್ಟಕ್ಕೆ ನಡೆ ಮುಂದೆ ನಾ ಬರಲಾರೆ ಎಳ್ಳಷ್ಟೂ ಹತ್ತಿರ/
ಯಾಕೋ ಭಯ ಹೇಗೋ ಇರುವ ಖುಷಿಗೂ ಬಂದರೆ ಕಷ್ಟ ಆಪತ್ತು//

ಕೈ ಕಾಲು ಕೊಸರಾಡಿ ಅಂದು ಜುಮ್ ಎಂದ ಎದೆ ಹಿಡಿದಿದೆ ಇಂದು ಜೋಲು/
ಶಾಖವಿರದ ಉತ್ಪನ್ನ ಹೆಪ್ಪುಗಟ್ಟದು ಮಂಜುಗಡ್ಡೆಯೂ ಹೀಗೆ ಯಾವತ್ತೂ//

ನಿನ್ನಿಂದಲೇ ಬತ್ತಿದ ಕಣ್ಣೀರಿಗೆ ಮತ್ತೆ ಮರುಜನ್ಮ ಸುನಾಮಿಯ ಪ್ರವಾಹ/
ಎಷ್ಟೆಂದು ತಡೆಯಲಿ ಹೋಗು ಅತ್ತು ಬಿಡುವೆ ಕಾಣದಂತೆ ದುಃಖ ನೀರಾದಿತ್ತು//

ಬಸವರಾಜ ಕಾಸೆ

More articles

Latest article