ಹೇಳಿ ಕೇಳಿ ಇಡಬಾರದಿತ್ತೆ ಕಳ್ಳಿ ಮೋಹ ಅದು ಎಂತಹ ಹಾವಳಿ/
ಬಳಿ ಬಂದ ಬಳ್ಳಿ ತಬ್ಬಿದೊಡನೆ ವಾಲಿ ಒದ್ದೆ ಮುದ್ದೆಯಾದ ಕಚಗುಳಿ//

ಹಳಾಹಳಿ ಈ ನಡಾವಳಿ ನಾಲಿಗೆ ಸವರಿ ತುಟಿ ಅಪ್ಪಿ ತುದಿ ಕಚ್ಚುವ ಕಳಾಕಳಿ/
ಹಿಡುವಳಿ ಉನ್ಮಾದ ಕಣ್ಸನ್ನೆ ಅಲಂಕಾರ ರಾತ್ರಿ ಪೂರಾ ಪೋಲಿ ಗೊತ್ತುವಳಿ//

ಹೋಳಿ ಆಡಲು ಕೆನ್ನೆ ಗುಳಿ ಯೌವನದ ಮೊಡವೆ ಹುರುಪು ಹುಳಿ/
ಇಳಿ ಮೇಲಿಂದ ಕೆಳಗೆ ಉಬ್ಬು ಇಳಿಜಾರು ದೇಹ ಏರುವ ದಾಹ ಭಾಷಾವಳಿ//

ಘಟನಾವಳಿ ಬಿಗಿಯಾಯಿತು ಹಸಿ ಸಲ್ಲಾಪ ತುಸು ಬಿಸಿ ಕೆರಳಿ/
ತೆರಳಿ ಸಡಲಿಸಿ ವಸ್ತ್ರ ಸಂಹಿತೆ ಮೈಮಾಟ ಮಾದಕ ಅಚ್ಚುಕಟ್ಟು ಚಳುವಳಿ//

ಮರಳಿ ಬೆರಳಾ ಸರಸ ಅಲ್ಲಲ್ಲಿ ಅರಳಿ ಸ್ಪರ್ಶ ನಾಚಿ ಚಿತ್ತಾರ ಸಾಲಾವಳಿ/
ಹೊರಳಿ ಹಾರಾಡಿ ಚಪ್ಪರಿಸಿ ಮುತ್ತಿಗೆ ಎಲ್ಲೆಲ್ಲೂ ಮುತ್ತುಗಳ ಸರಪಳಿ//

ನರಳಿ ದುಂಡು ಮಲ್ಲಿಗೆ ದಿಂಡು ತುಂಟಾಟ ಒಬ್ಬಟ್ಟು ಖಾನಾವಳಿ/
ರಸಾವಳಿ ಬೆವರಿ ಜಿಲ್ ಜಿಲ್ ಝೇಂಕಾರ ಒಂದಾಗುವ ಬಳುವಳಿ//

ಕರಾವಳಿ ಕಡೆದ ಮಧು ಶಾಲೆ ಮೃದು ಹೆಣ್ಣೆ ನುಣುಪು ಬೆಣ್ಣೆ ವಂಶಾವಳಿ/
ಅವಳಿ ಜವಳಿ ಮುದ್ದಾದ ಸಾಗುವಳಿ ರಾತ್ರಿ ರೋಮಾಂಚನ ದೀಪಾವಳಿ//

ಬಸವರಾಜ ಕಾಸೆ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here