Friday, October 27, 2023

ಕೊಲೆ ಆರೋಪಿಗಳಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ

Must read

ಬಂಟ್ವಾಳ: ಕತ್ತು ಹಿಸುಕಿ ವ್ಯಕ್ತಿಯೋರ್ವನನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿದೆ.
ನಾವೂರು ಗ್ರಾಮದ ನಾವೂರು ಆಸ್ಪತ್ರೆ ಯ ಬಳಿ ನಿವಾಸಿ ದಿ| ಕುಂಞಪ್ಪ ಪೂಜಾರಿ ಅವರ ಪುತ್ರ ಹರೀಶ್ ಕೋಟ್ಯಾನ್ ಯಾನೆ ಕೋಟಿ ಪೂಜಾರಿ ಹಾಗೂ ನಾವೂರು ಗ್ರಾಮದ ಇತ್ತಿಲು ನಿವಾಸಿ ಶಾಂತಪ್ಪ ಪೂಜಾರಿ ಅವರ ಪುತ್ರ ಹೇಮಚಂದ್ರ ಎಂಬವರು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದವರು.

ಘಟನೆಯ ವಿವರ:
ಅಕ್ಟೋಬರ್ 17 – 2015 ರಂದು ಸುರೇಶ್ ಅವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಬಳಿಕ ಮನೆಯವರ ಸಂಶಯದ ಮೇಲೆ ತನಿಖೆ ನಡೆಸಲು ಮುಂದಾದಾಗ ಅದೊಂದು ಕೊಲೆ ಪ್ರಕರಣವಾಗಿ ಮಾರ್ಪಟ್ಟಿತು.
ಸುರೇಶ್ ಅವರು ಅವರ ಸ್ನೇಹಿತರಾದ ಹರೀಶ್ ಕೋಟ್ಯಾನ್, ಹೇಮಚಂದ್ರ, ನೀಲಪ್ಪ, ವಸಂತ ಹಾಗೂ ರಮೇಶ್ ಅವರ ಜೊತೆ ಕೆಲಸ ಮುಗಿಸಿ ನೇತ್ರಾವತಿ ನದಿಗೆ ಸ್ನಾನಕ್ಕೆಂದು ತೆರಳಿದ್ದರು. ಆದರೆ ಸುರೇಶ್ ಅವರನ್ನು ಹರೀಶ್ ಮತ್ತು ಹೇಮಚಂದ್ರ ಅವರು ಕತ್ತು ಹಿಸುಕಿ ಕೊಲೆ ನಡೆಸಿ ಬಳಿಕ ನದಿಗೆ ಎಸೆಯುತ್ತಾರೆ. ಬಳಿಕ ಇವರ ಪತ್ನಿ ಸುನಂದ ಅವರಿಗೆ ಪೋನ್ ಮಾಡಿ ನಿಮ್ಮ ಗಂಡ ನೀರಿನಲ್ಲಿ ಮುಳುಗಿದಾಗ ನಾವು ಮೇಲಕ್ಕೆತ್ತಿದ್ದೇವೆ ಎಂದು ಸುಳ್ಳು ಹೇಳಿದ್ದರು. ಸುನಂದ ಅವರು ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರ ಕ್ಕೆ ಬಂದು ಶವಗಾರದಲ್ಲಿದ್ದ ಗಂಡನ ಮೃತದೇಹವನ್ನು ನೋಡಿದಾಗ ಕುತ್ತಿಗೆಯ ಭಾಗದಲ್ಲಿ ಗಾಯಗಳಾಗಿದ್ದು , ಸಂಶಯಗೊಂಡ ಇವರು ಇದೊಂದು ಕೊಲೆ ಪ್ರಕರಣ ಇದರ ಸಂಪೂರ್ಣ ತನಿಖೆಯಾಗಬೇಕು ಎಂದು ಇವರ ಮೇಲೆ ಗ್ರಾಮಾಂತರ ಪೋಲೀಸರಿಗೆ ದೂರು ನೀಡಿದ್ದರು.
ಅದರಂತೆ ಅಖಾಡಕ್ಕೆ ಇಳಿದ ಗ್ರಾಮಾಂತರ ಎಸ್ .ಐ ರಕ್ಷಿತ್ ಅವರು ತನಿಖೆ ನಡೆಸಿದಾಗ ಆರೋಪಿಗಳು ಅಡಿಕೆ ಕಳ್ಳತನ ಮಾಡುತ್ತಿದ್ದು ಸುರೇಶ್ ಆವರು ಕಳ್ಳತನ ಬಗ್ಗೆ ಮಾಹಿತಿ ನೀಡುತ್ತಾರೆ ಎಂದು ಕೊಲೆ ಮಾಡಿರುವುದಾಗಿ ತಪ್ಪೋಪ್ಪಿಕೊಂಡಿರುತ್ತಾರೆ. ಹಾಗಾಗಿ ಇದು ಗಂಭೀರ ಪ್ರಕರಣ ಎಂದು ದಾಖಲಿಸಿ ಆಗಿನ‌ ವೃತ್ತ ನಿರೀಕ್ಷಕ ಬೆಳ್ಳಿಯಪ್ಪ ಅವರಿಗೆ ಪ್ರಕರಣವನ್ನು ವರ್ಗಾವಣೆ ಮಾಡುತ್ತಾರೆ.
ಬೆಳ್ಳಿಯಪ್ಪ ಅವರು ಇವರ ಮೇಲೆ ನ್ಯಾಯಲಯದಲ್ಲಿ ಜನವರಿ-14- 2016 ರಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದ, ಡಿ.21 – 2018 ರಂದು ಅಂತಿಮ ತೀರ್ಪು ಹೊರಡಿಸಿದ ಮಂಗಳೂರು ನ್ಯಾಯಲಯವು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.‌

More articles

Latest article